Neeyum Naanum Anbe
Raghu Dixit
4:46ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ ಹೃದಯದಗದೀ ನಾಜೂಕು ಕೊಡುವೆನು ಕಿವಿಯಲಿ ವರದಿ ಗುಣಪಡಿಸಲು ನೀ ಬೇಕು ಬರುವುದೇ ನನ್ನಯ ಸರದಿ ಎದೆಗೊರಗಿ ಆಲಿಸಿ ಚೆಲುವೆ ಮಾಡಿಬಿಡು ತಪಾಸಣೆ ಶುರು ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ ಜೊತೆ ನಿಲ್ಲುತ್ತಾ ಕೂರುತ್ತಾ ನಿನ್ನೊಂದಿಗೆ ಸಖಿ ನಾನಾಗುವೆ ನಿಪುಣ ಕನಸೆಂಬ ಖಜಾನೆ ಇಗೋ ತುಂಬಿದೆ ತುಸು ದೂರದರೂ ಕಠಿಣ ಘಮ ಘಮಿಸಿ ಕವಿದ ಹೆರಳಲ್ಲೀಗ ಕಳೆದೋಗೋದೆ ಪರಮಾನಂದ ಅರೆ ಬಿರಿದು ನಗುವ ಸಿಹಿ ಹೂವಂತೆ ಪಿಸು ಮಾತಾಡು ತುಸು ಜೋರಿಂದ ಮನ ಈಗಾಗಲೇ ತೆರೆದೋದುತ್ತಿದೆ ಬರೆಯದಿರುವ ಕಾಗದ ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೀ ನೋಡಿಕೋ ನಿನ್ನ ಮುದ್ದಾಗಿರೋ ನಿಲುವು ಬರಿದಾದಂತ ಬಾಳಲ್ಲಿ ಬಂದಂತಿದೆ ಬಲು ರೋಮಾಂಚಕ ತಿರುವು ಗರಿಗೆದರಿ ಸನಿಹ ಕುಣಿದಾಡುತ್ತಾ ಮನ ತಂತಾನೇ ನವಿಲಾದಂತೆ ಅವಿತಿರುವ ಒಲವು ಬಯಲಾಗುತ್ತಾ ಕ್ಷಣ ಇನ್ನಷ್ಟು ನವಿರಾದಂತೆ ಪುಟ ಅಚ್ಚಾಗಿದೆ ಪತ ಹೆಚ್ಚಾಗಿದೆ ಎದುರೇ ಇರಲು ದೇವತೆ ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ ಹೃದಯದಗದೀ ನಾಜೂಕು ಕೊಡುವೆನು ಕಿವಿಯಲಿ ವರದಿ ಗುಣಪಡಿಸಲು ನೀ ಬೇಕು ಬರುವುದೇ ನನ್ನಯ ಸರದಿ ಎದೆಗೊರಗಿ ಆಲಿಸಿ ಚೆಲುವೆ ಮಾಡಿಬಿಡು ತಪಾಸಣೆ ಶುರು