Namma Tulunadu
Mr. Solo Raj Melingi, Sathwik Aradhya, Rashmitha Changappa, And Siddhartha Belmannu
3:48ಎಂದೋ ಬರೆದ ಕವಿತೆ ಸಾಲು ಬೊಗಸೆ ಹಿಡಿದ ಮಳೆಯ ನೀರು ಊರ ದಾರಿ ಬೀಸೋ ಗಾಳಿ ಹೇಳುತಲಿವೆ ನವಿರಾದ ಕಥೆಯೊಂದನು ನೂರಾರು ಹೆಸರಿರದ ಸವಿ ಭಾವನೆಗಳ ಹೆಸರಾಂತ ಸಂಕಲನ ಪ್ರೀತಿಯ ಎಂದೋ ಬರೆದ ಕವಿತೆ ಸಾಲು ಬೊಗಸೆ ಹಿಡಿದ ಮಳೆಯ ನೀರು ಊರ ದಾರಿ ಬೀಸೋ ಗಾಳಿ ನಿನ್ನ ಸೇರಿ ಪ್ರೀತಿ ಛಾಳಿ ಹೂವೆದೆಯಲಿ ಜೇನು ಅನುಭವಿಸದೆ ತಾನು ದುಂಬಿಗೆ ತಾ ನೀಡೋ ವಾತ್ಸಲ್ಯವೇ ಪ್ರೀತಿ ಮಣ್ಣೊಳಗಿನ ಬೇರು ಕುಡಿಯದೆ ತಾ ನೀರು ಚಿಗುರೆಲೆಗೆ ಉಣಿಸೋ ತ್ಯಾಗವದೇ ಪ್ರೀತಿ ಎಲ್ಲವ ಕೊಡುವ ದೇವರ ಕೂಡ ಸೋಲಿಸಿಬಿಡುವ ಸೋಜಿಗ ಪ್ರೀತಿ ಸುತ್ತಲು ಇರುವ ಲೋಕವನೆಲ್ಲಾ ಮರೆಸುವುದದರ ಅದ್ಭುತ ರೀತಿ ಒಲವಿನ ನಿಧಿಯನೆ ಕಸಿದರೆ ನೀ ಹೀಗೆಯೇ ಏನನು ಮಾಡಲಿ ಎಂದೋ ಬರೆದ ಕವಿತೆ ಸಾಲು ಬೊಗಸೆ ಹಿಡಿದ ಮಳೆಯ ನೀರು ಊರ ದಾರಿ ಬೀಸೋ ಗಾಳಿ ಹೇಳುತಲಿವೆ ನವಿರಾದ ಕಥೆಯೊಂದನು ನೂರಾರು ಹೆಸರಿರದ ಸವಿ ಭಾವನೆಗಳ ಹೆಸರಾಂತ ಸಂಕಲನ ಪ್ರೀತಿಯ ಎಂದೋ ಬರೆದ ಕವಿತೆ ಸಾಲು ಬೊಗಸೆ ಹಿಡಿದ ಮಳೆಯ ನೀರು ಹೂವೆದೆಯಲಿ ಜೇನು ಅನುಭವಿಸದೆ ತಾನು ದುಂಬಿಗೆ ತಾ ನೀಡೋ ವಾತ್ಸಲ್ಯವೇ ಪ್ರೀತಿ ಮಣ್ಣೊಳಗಿನ ಬೇರು ಕುಡಿಯದೆ ತಾ ನೀರು ಚಿಗುರೆಲೆಗೆ ಉಣಿಸೋ ತ್ಯಾಗವದೇ ಪ್ರೀತಿ