Nee Parichaya
Raghu Dixit, Vasuki Vaibhav, Siddhartha Belmannu, And Rakshita Suresh
3:39ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ ಕುಟ್ಟು ಭತ್ತವ ತಟ್ಟು ರೊಟ್ಟಿಯ ಕೇಳು ಎಲ್ಲೆಲ್ಲೂ ಪದವೈತೆ ಕಟ್ಟು ಗಾಡಿಯ ಸುತ್ತು ರಾಟೆಯ ಎಲ್ಲೆಲ್ಲೂ ಕೇಳು ಪದವೈತೆ ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ ಓರಿಕೊರಳಿನ ಗಂಟೆ ಶಬ್ದವು ಗೋಧೂಳಿ ಸಂಜೆಗೆ ಪದ ಹಸುಗೂಸಿನ ಗೆಜ್ಜೆ ಸಪ್ಪಳ ಹಡೆದವ್ಗೆ ನಿತ್ಯದಾ ಪದ ಹೊತ್ಮೂಡ್ತು ಅನ್ನೊ ಕೋಳಿ ಕೂಗು ಹಳ್ಳಿಯ ಕಾಯ ಪದವು ಅಂಬಾ ಹಸಿವಾತು ಅನ್ನೊ ಕರುವ ಕೂಗಲಿ ಬೆಳಕ ಪದವು ರುಚಿಯದು ಅನ್ನದ ಪದವೋ ಅನ್ನವು ಬೆವರಿನ ಪದವೋ ಬೆವರದು ದುಡಿಮೆಯ ಪದವೋ ದುಡಿಮೆಯು ಭಕುತಿ ಪದವೋ ಭೂತಾಯಿ ಜೋಗುಳ ಜಗಕ್ಕೆ ಸರಿಗಮಪ ಮಗುವಂತ ಮನಸ್ಸಲ್ಲಿ ಎಂದೆಂದೂ ಸನಿದಪಮ ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ ಗೋಡೆಯ ಕೆಡವಿ ಸೇತುವೆ ಕಟ್ಟುವ ಪದವೊಂದ ಮಾದಪ್ಪನೆ ಎಸೆಯೋ ಭೂಮಿಗೆ ಬೆಳಗಲಿ ಸಂಬಂಧ ನೋವಿರುವ ನಲಿವಿರುವ ಬದುಕೊಂದು ಪದದಸಂತೆ ದಣಿದಿರುವ ಮನಗಳಿಗೆ ಪದವೊಂದು ಹೆಗಲಿನಂತೆ ನಿಂತಲ್ಲೇ ನಿಲದಿರು ಜೀವ ಹರಿದಾಡು ಪದದಂತೆ ಪದವಾಗ್ಲಿ ಬದುಕು ಹೂವೊಂದು ಬೇರಿನ ಪದವೋ ಹಣ್ಣೊಂದು ಮಣ್ಣಿನ ಪದವೋ ನಗುವದು ಒಲವಿನ ಪದವೋ ಒಲವದು ಬದುಕಿನ ಪದವೋ ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವ ತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ ಉಘೇ ಮಾತ್ಮಲ್ಲ್ಯಾ