Hudugirandre Ft. B.C.Patil, Prema, B.Jayashree (Feat. B.C.Patil, Prema & B.Jayashree)
L N Shastri,Hamsalekha
4:49ಏನೈತೋ ಅಂತರಾಳದಾಗೆ ಏನೈತೋ ಅಂತರಾಳದಾಗೆ ಏನೈತೋ ಚಿಗುರೈತೋ, ಮಾಗೈತೋ, ಅರಳೈತೋ, ಮುದುರೈತೋ ಪ್ರೀತಿ ರಸ ಬಳ್ಳಿ ಎಂಬುದು ಎಲೈತೋ ಅಲ್ಲಿ ಬಾಳ ಮೊಗ್ಗು ಎಂದು ನಗುತೈತೋ ಏನೈತೋ ಅಂತರಾಳದಾಗೆ ಏನೈತೋ ಅಂತರಾಳದಾಗೆ ಏನೈತೋ ಪ್ರೀತಿ ಅಂದ್ರೆ ಗೋಡೆಗೆ ಎಸೀಯೋ ಚಂಡು ಅಂತಾರೆ ಪುಟಿಯೋ ಚಂಡು ಅಂತಾರೆ ಪ್ರೀತಿ ಅಂದ್ರೆ ಕೂಸಿಗೆ ಕಲ್ಸೋ ಮಾತು ಅಂತಾರೆ ಮುದ್ದಿನ ಮಾತು ಅಂತಾರೆ ಪ್ರೀತಿ ಅಂದ್ರೆ ಗಿರಿಗೋಳ್ ಮುಂದಿನ ಕೊನಿಗೊಳ್ ಅಂತಾರೆ ಪ್ರತಿ ಧ್ವನಿಗೊಳ್ ಅಂತಾರೆ ದೀಪದಿಂದ ದೀಪಾ ಹಚ್ಚೋ ಜ್ಯೋತಿ ಅಂತಾರೆ ಪ್ರೀತಿ ಜ್ಯೋತಿ ಅಂತಾರೆ ನಾವು ಕೊಟ್ಟರೆ ತಾನು ಕೊಡುವೇನು ನಾವು ಕೊಟ್ಟರೆ ತಾನು ಕೊಡುವೇನು ಅಂತದೆ ಮನಸಾರೆ ಏನೈತೋ ಅಂತರಾಳದಾಗೆ ಏನೈತೋ ಅಂತರಾಳದಾಗೆ ಏನೈತೋ ಎಲ್ಲರ ಎದೆಯಲ್ಲೂ ಇರತೈತೆ ಪ್ರೇಮ ಪರಸಂಗ ಒಂದು ಪ್ರೇಮ ಪರಸಂಗ ಕೂಗದೇನೆ ಹೋಗೋ ಮದುವೆಲಿ ಅಗೋ ಮುಖಭಂಗ ಒಲ್ಲದ ಪ್ರೀತಿ ರಸಭಂಗ ನಾವು ಹುಟ್ಟಿದ ಮ್ಯಾಲೆ ಸಾವು ಬಂದೆ ಬರುತೈತೆ ಬ್ಯಾಡ ಅಂದ್ರೆ ನಗುತೈತೆ ಪ್ರೀತಿ ಹುಟ್ಟಿದ ಮ್ಯಾಲೆ ಒಳಗೆ ನಗುತಾ ಇರುತೈತೆ ಸಾಯುವರೆಗೂ ಕಾಯ್ತೈತೆ ದಕ್ಕದಿದ್ರು ಪ್ರೀತಿಸೋದೆ ದಕ್ಕದಿದ್ರು ಪ್ರೀತಿಸೋದೆ ಪ್ರೀತಿಯ ಗುಣವಂತೆ ಏನೈತೋ ಅಂತರಾಳದಾಗೆ ಏನೈತೋ ಅಂತರಾಳದಾಗೆ ಏನೈತೋ ಚಿಗುರೈತೋ, ಮಾಗೈತೋ, ಅರಳೈತೋ, ಮುದುರೈತೋ ಪ್ರೀತಿ ರಸ ಬಳ್ಳಿ ಎಂಬುದು ಎಲೈತೋ ಅಲ್ಲಿ ಬಾಳ ಮೊಗ್ಗು ಎಂದು ನಗುತೈತೋ ಏನೈತೋ ಅಂತರಾಳದಾಗೆ ಏನೈತೋ ಅಂತರಾಳದಾಗೆ ಏನೈತೋ