Neenaade Naa
Thaman S, Armaan Malik, Shreya Ghoshal, And Ghouse Peer
4:13ಸಾಲುತಿಲ್ಲವೇ ಸಾಲುತಿಲ್ಲವೇ ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ ಸಾಲುತಿಲ್ಲವೇ ಸಾಲುತಿಲ್ಲವೇ ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ ಒಂದೇ ಸಮನೆ ನಿನ್ನಾ ನೋಡುತಿದ್ದ ಮೇಲೂ ತುಂಬ ಸಲುಗೆಯಿಂದಾ ಬೆರೆತು ಹೋದ ಮೇಲೂ ಪಕ್ಕದಲ್ಲಿ ಕುಳಿತುಕೊಂಡು ನಿನ್ನ ಮೈಗೆ ಅಂಟಿಕೊಂಡು ಉಸಿರು ಉಸಿರು ಬೆಸೆದ ಮೇಲೂ ಸಾಲುತಿಲ್ಲವೇ ಸಾಲುತಿಲ್ಲವೇ ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ ಸಾಲುತಿಲ್ಲವೇ ಸಾಲುತಿಲ್ಲವೇ ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ ಮುಂಜಾನೆ ನನ್ನ ಪಾಲಿಗಂತೂ ಸಾಲೋಲ್ಲ ಮುಸ್ಸಂಜೆ ತನಕ ಸನೀಹವಂತೂ ಸಾಲೋಲ್ಲ ನನ್ನಾಸೆ ಅನಿಸಿಕೆ ನಾ ಹೇಳಲು ನಿಘಂಟು ಪದಗಳೇ ಸಾಲೋದಿಲ್ಲ ನಿನ್ನೊಲವ ಚೆಲುವ ಅಳೆವ ಕಣ್ಣು ಸಾಲೋದಿಲ್ಲ ನನ್ನೊಲವ ಬರೆವೆ ಗಗನ ಹಾಳೆ ಸಾಲೋದಿಲ್ಲ ಋತುಗಳೆಲ್ಲ ತಿರುಗಿ ಹೋಗಿ ಸಮಯ ಹಿಂದೆ ಸರಿದು ಹೋಗಿ ಮೊದಲ ಭೇಟಿ ನೆನೆದಾ ಮೇಲೂ ಸಾಲುತಿಲ್ಲವೇ ಸಾಲುತಿಲ್ಲವೇ ನಿನ್ನ ಹಾಗೆ ಅಮಲು ಬೇರೆ ಇಲ್ಲವೇ ನಿಸರ್ಗ ಹೇಳುತಿರುವ ಶಕುನ ಸಾಲೋಲ್ಲ ಸಲ್ಲಾಪದಲ್ಲೂ ಇರುವ ಸುಖವು ಸಾಲೋಲ್ಲ ಆಯಸ್ಸು ಹೆಚ್ಚಿಗೆ ಸಾಲೋದಿಲ್ಲ ನೂರಾರು ಜನ್ಮವು ಸಾಲೋದಿಲ್ಲ ನನ್ನೊಳಗೆ ಇರುವ ರಾಶಿ ಕನಸು ಸಾಲೋದಿಲ್ಲ ನನಸಾಗಿಸೋಕೆ ದೈವಗಳು ಸಾಕಾಗೋಲ್ಲ ಏಳು ಸ್ವರವು ಮುಗಿದ ಮೇಲೂ ಕಾಡುವಂಥ ನನ್ನ ನಿನ್ನ ಯುಗಳ ಗೀತೆ ಮುಗಿಯೋದಿಲ್ಲ ಸಾಲುತಿಲ್ಲವೇ ಸಾಲುತಿಲ್ಲವೇ ನಿನ್ನ ಹಾಗೆ ಅಮಲು ಬೇರೆ ಇಲ್ಲವೇ ಶ್ವಾಸದಲ್ಲಿ ನೀನು ವಾಸವಿದ್ಧ ಮೇಲೂ ನನ್ನ ಹೃದಯವನ್ನು ಹಾಯಾಗಿ ಕದ್ಧ ಮೇಲೂ ಎರಡು ಹೃದಯ ಬೆರೆತ ಮೇಲೂ ಹಾಡು ಮುಗಿದು ಹೋದ ಮೇಲೂ ಮೌನ ತುಂಬಿ ಬಂದ ಮೇಲೂ ಸಾಲುತಿಲ್ಲವೇ ಸಾಲುತಿಲ್ಲವೇ ನಿನ್ನ ಹಾಗೆ ಅಮಲು ಬೇರೆ ಇಲ್ಲವೇ