Gamanisu
Sonu Nigam
4:48ಸರಿಯಾಗಿ ನೆನಪಿದೆ ನನಗೆ ಇದಕ್ಕೆಲ್ಲ ಕಾರಣ ಕಿರು ನಗೆ ಮನದಾ ಪ್ರತಿ ಗಲ್ಲಿಯೊಳಗು ನಿನ್ನದೆ ಮೆರವಣಿಗೆ ಕನಸಿನ ಕುಲುಮೆಗೆ ಉಸಿರನು ಊದುತಾ ಕಿಡಿ ಹಾರುವುದು ಇನ್ನು ಖಚಿತ ಸರಿಯಾಗಿ ನೆನಪಿದೆ ನನಗೆ ಇದಕ್ಕೆಲ್ಲ ಕಾರಣ ಕಿರು ನಗೆ ಕಣ್ಣಲ್ಲೆ ಇವೆ ಎಲ್ಲಾ ಕಾಗದ ನೀನೆ ನನ್ನಯ ಅಂಚೆ ಪೆಟ್ಟಿಗೆ ಏನೇ ಕಂಡರೂ ನೀನೆ ಜ್ಞಾಪಕ ನೀನೆ ಔಷಧಿ ನನ್ನ ಹುಚ್ಚಿಗೆ ತೆರೆದು ನೀನು ಮುದ್ದಾದ ಅಧ್ಯಾಯ ಸಿಗದೇ ಇದ್ರೆ ತುಂಬಾನೆ ಅನ್ಯಾಯ ನನ್ನಯ ನಡೆ ನುಡಿ ನಿನ್ನನೇ ಬಯಸುತಾ ಬದಲಾಗುವುದು ಇನ್ನೂ ಖಚಿತ ಸರಿಯಾಗಿ ನೆನಪಿದೆ ನನಗೆ ಇದಕ್ಕೆಲ್ಲ ಕಾರಣ ಕಿರು ನಗೆ ನಿನ್ನ ನೃತ್ಯಕೆ ಸಿದ್ಧವಾಗಿದೆ ಅಂತರಂಗದಾ ರಂಗಸಜ್ಜಿಕೆ ನಿನ್ನ ನೋಡದ ನನ್ನ ಜೀವನ ಸುದ್ದಿ ಇಲ್ಲದ ಸುದ್ದಿ ಪತ್ರಿಕೆ ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು ಸರಸಕ್ಕೀಗ ನಿಂದೇನೆ ಕಾನೂನು ಕೊರೆಯುವ ನೆನಪಲಿ ಇರುಳನು ಕಳೆಯುತಾ ಬೆಳಗಾಗುವುದು ಇನ್ನೂ ಖಚಿತ ಸರಿಯಾಗಿ ನೆನಪಿದೆ ನನಗೆ ಇದಕ್ಕೆಲ್ಲ ಕಾರಣ ಕಿರು ನಗೆ