Yarele Ninna Mechidavanu

Yarele Ninna Mechidavanu

Hamsalekha

Длительность: 4:08
Год: 1996
Скачать MP3

Текст песни

(ಯಾರೆಲೇ ನಿನ್ನ ಮೆಚ್ಚಿದವನು
ಯಾರೆಲೇ ಕೆನ್ನೆ ಕಚ್ಚುವವನು
ಯಾರೆಲೇ ಮಲ್ಲೆ ಮುಡಿಸುವವನು
ಯಾರೆಲೇ ಸೆರಗ ಎಳೆಯುವವನು)

ಹೇಳೇ ಹುಡುಗಿ
ಹೇಳೇ ಬೆಡಗಿ
ನಿನ್ನ ಸೇರಗ ಎಳೆಯೋ ಹುಡುಗ ನಾನು ತಾನೆ
ನಿನ್ನ ಗಂಡ ನಾನೇ

ಇಲ್ಲಾ ಇಲ್ಲ
ಆಗೋದಿಲ್ಲ
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚಂದ ಅಲ್ಲ

ಜೀವದ ಗೊಂಬೆ ನಾನಮ್ಮ
ಭೀಮನೆಂಬ ಮಣ್ಣು ಗೊಂಬೆ ಯಾಕಮ್ಮ
ಗೊಂಬೆ ಬೇಕು ಪೂಜೆಗೆ
ಪೂಜೆ ಬೇಕು ಮನಸಿಗೆ
ಮನಸು ಬೇಕು ಪ್ರೀತಿಗೆ
ಪ್ರೀತಿ ಬೇಕು ಹೆಣ್ಣಿಗೆ

(ಯಾರೆಲೇ ನೀನು ಮೆಚ್ಚಿದವನು
ಯಾರೆಲೇ ತಾಳಿ ಕಟ್ಟುವವನು
ಯಾರೆಲೇ ನಿನ್ನ ಕಾಡುವವನು
ಯಾರೆಲೇ ನಿನ್ನ ಕೂಡುವವನು)

ಹೇಳೇ ಹುಡುಗಿ
ಹೇಳೇ ಬೆಡಗಿ
ನಿನ್ನ ಉಸಿರು ಹೇಳೋ ಹೆಸರು ನಂದು ತಾನೇ
ನಿನ್ನ ಗಂಡ ನಾನೇ

ಇಲ್ಲಾ ಇಲ್ಲ
ಆಗೋದಿಲ್ಲ
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚಂದ ಅಲ್ಲ

ಸಾವಿರ ಜನ್ಮ ಬರಲಮ್ಮ
ನನ್ನ ಪ್ರೀತಿ ನನ್ನ ಪ್ರಾಣ ನಿನಗಮ್ಮ
ಚಂದಮಾಮ ಅಲ್ಲಿದೆ
ನೈದಿಲೆ ಹೂ ಇಲ್ಲಿದೆ
ಚಂದ್ರನೇ ಇಲ್ಲಿ ಬಂದರೆ
ಹೂವಿಗೆ ಭಯವಾಗದೆ

(ಯಾರೆಲೇ ನಿನ್ನ ಮುದ್ದು ಗಂಡ
ಯಾರೆಲೇ ನಿನ್ನ ತುಂಟ ಗಂಡ
ಯಾರೆಲೇ ನಿನ್ನ ವೀರ ಗಂಡ
ಯಾರೆಲೇ ನಿನ್ನ ಧೀರ ಗಂಡ)

ಹೇಳೇ ಹುಡುಗಿ
ಹೇಳೇ ಬೆಡಗಿ
ವೀರ ಧೀರ ಜೋಕುಮಾರ ನಾನು ತಾನೇ
ನಿನ್ನ ಗಂಡ ನಾನೇ

ಇಲ್ಲಾ ಇಲ್ಲ
ಆಗೋದಿಲ್ಲ
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚಂದ ಅಲ್ಲ