Moda Modalu

Moda Modalu

Rajesh Krishnan, Nanditha

Альбом: Yeswanth
Длительность: 5:28
Год: 2005
Скачать MP3

Текст песни

ಮೊದ -ಮೊದಲು ಭೂಮಿಗಿಳಿದ ಮಳೆಹನಿಯು ನೀನೇನಾ?
ಹೂವೆದೆಯ ಚುಂಬಿಸಿದ ಇಬ್ಬನಿಯು ನೀನೇನಾ?
ಬಾರದೆ ನನ್ನ ಕನಸಲ್ಲಿ, ಕಾಣದೆ ನನ್ನ ಎದುರಲ್ಲಿ
ಇದ್ದೆಯೋ ಯಾವ್ ಊರಲ್ಲಿ, ನೀನ್ ಅವಿತು ಕುಳಿತು?

ಅಲ್ಲ, ಮಳೆಹನಿ ಅಲ್ಲ, ನಾನು ಇಂಗೋದಿಲ್ಲ
ಅಲ್ಲ, ಇಬ್ಬನಿ ಅಲ್ಲ, ನಾನು ಆರೋದಿಲ್ಲ
ಬಲೂ ಸೀದಾ, ಬಲೂ ಸಾದಾ ಹುಡುಗ ಕಣೆ ಇವನು
ನಾನು ಬಾರದೆ ನಿನ್ನ ಕನಸಲ್ಲಿ, ಕಾಣದೆ ನಿನ್ನ ಎದುರಲ್ಲಿ
ಇದ್ದೆನು ನನ್ನ ಊರಲ್ಲಿ ನನ್ನಷ್ಟಕ್ಕೆ ನಾ

ಅಮ್ಮನ ಪ್ರೀತಿ ಹೇಗೆ ಎಂದು ನಾ ಕಂಡಿಲ್ಲ ಕ್ಷಣ ಕೂಡವೂ
ಅಮ್ಮನ ರೀತಿ ನಿನ್ನ ಪ್ರೀತಿಯು ಅಂತಲ್ಲ ಮನಸೆಲ್ಲವೂ
ಕೋಟಿ ದೇವರು ಕೂಡಿ ಕೊಟ್ಟರೂ ಸಾಟಿಯಾಗದು ತಾಯಿಗೆ
ಅಂಥ ಪ್ರೀತಿಯ ನನ್ನ್ಹಂಗ್ ಅಂತಿಯಾ, ಸುಳ್ಳು ಹೇಳ್ತಿಯಾ ಏಕೆ ಹುಡುಗಿಯೆ?

ಮೊದ -ಮೊದಲು ಭೂಮಿಗಿಳಿದ ಮಳೆಹನಿಯು ನೀನೇನಾ?
ಹೂವೆದೆಯ ಚುಂಬಿಸಿದ ಇಬ್ಬನಿಯು ನೀನೇನಾ?
ಬಾರದೆ ನನ್ನ ಕನಸಲ್ಲಿ, ಕಾಣದೆ ನನ್ನ ಎದುರಲ್ಲಿ
ಇದ್ದೆಯೋ ಯಾವ್ ಊರಲ್ಲಿ, ನೀನ್ ಅವಿತು ಕುಳಿತು?

ಅಲ್ಲ, ಮಳೆಹನಿ ಅಲ್ಲ, ನಾನು ಇಂಗೋದಿಲ್ಲ
ಅಲ್ಲ, ಇಬ್ಬನಿ ಅಲ್ಲ, ನಾನು ಆರೋದಿಲ್ಲ
ಬಲೂ ಸೀದಾ, ಬಲೂ ಸಾದಾ ಹುಡುಗ ಕಣೆ ಇವನು
ನಾನು ಬಾರದೆ ನಿನ್ನ ಕನಸಲ್ಲಿ, ಕಾಣದೆ ನಿನ್ನ ಎದುರಲ್ಲಿ
ಇದ್ದೆನು ನನ್ನ ಊರಲ್ಲಿ ನನ್ನಷ್ಟಕ್ಕೆ ನಾ

ಆ ತಂಗಾಳಿ ತೇಲೋ ರೀತಿ, ನಾ ಹೇಗೆಂದು ತಿಳಿದಿಲ್ಲವೊ
ನಿನ್ನಯ ಸ್ಪರ್ಶ ತಂದ ಹರ್ಷದ ಹಾಗಂತು ನನ್ನ ಹೃದಯವೊ
ಸುಮ್ಮನೇತಕೇ ತಂಪು ಗಾಳಿಗೆ ನನ್ನ ಹೋಲಿಕೆ ಮಾಡುವೆ?
ಸುಂಟರಗಾಳಿಗೆ ಮಾಡು ಹೋಲಿಕೆ, ಆಗ ಒಪ್ಪಿಗೆ ನಾನು ನೀಡುವೆ

ಮೊದ -ಮೊದಲು ಭೂಮಿಗಿಳಿದ ಮಳೆಹನಿಯು ನೀನೇನಾ?
ಹೂವೆದೆಯ ಚುಂಬಿಸಿದ ಇಬ್ಬನಿಯು ನೀನೇನಾ?
ಬಾರದೆ ನನ್ನ ಕನಸಲ್ಲಿ, ಕಾಣದೆ ನನ್ನ ಎದುರಲ್ಲಿ
ಇದ್ದೆಯೋ ಯಾವ್ ಊರಲ್ಲಿ, ನೀನ್ ಅವಿತು ಕುಳಿತು?

ಅಲ್ಲ, ಮಳೆಹನಿ ಅಲ್ಲ, ನಾನು ಇಂಗೋದಿಲ್ಲ
ಅಲ್ಲ, ಇಬ್ಬನಿ ಅಲ್ಲ, ನಾನು ಆರೋದಿಲ್ಲ
ಬಲೂ ಸೀದಾ, ಬಲೂ ಸಾದಾ ಹುಡುಗ ಕಣೆ ಇವನು
ನಾನು ಬಾರದೆ ನಿನ್ನ ಕನಸಲ್ಲಿ, ಕಾಣದೆ ನಿನ್ನ ಎದುರಲ್ಲಿ
ಇದ್ದೆನು ನನ್ನ ಊರಲ್ಲಿ ನನ್ನಷ್ಟಕ್ಕೆ ನಾ