Idhedho Bagundhe
Vijay Prakash
4:27ಥರಾ ಥರಾ ಹಿಡಿಸಿದೆ ಮನಸಿಗೆ ನೀನು ಹಗಲಲೇ ಮುಳುಗಿದೆ ಕನಸಲಿ ನಾನು ಹಿಡಿದರೂ ಕುಣಿಯುತ ಹೃದಯವಿದು ಹಿಡಿತಕೆ ಸಿಗುತ್ತಿಲ್ಲ ಕುಂತರೂ ನಿಂತರೂ ನಿನ ಭಜನೆ, ಬೇರೆ ಕೆಲಸಾನೇ ಇಲ್ಲ ಥರಾ ಥರಾ ಹಿಡಿಸಿದೆ ಮನಸಿಗೆ ನೀನು ಹಗಲಲೇ ಮುಳುಗಿದೆ ಕನಸಲಿ ನಾನು ಈ ನಗು ಸಿಗಲು ಚಂದಮಾಮ ಇನ್ನೇಕೆ ನಾ ಇದೇ ಮೊದಲು ಕಂಡೆ ಮಾತಾಡೋ ಜಿಂಕೆ ಪ್ರೀತಿಯ ರುಚಿಯನು ಇಂದು ನಾ ತಿಳಿದೆನು ಎಂಥ ಹೊಸತನ ಕಳೆದೋದೆ ಈಗ ನಾ ನನ್ನಲಿ ರಸಿಕನು ಜನುಮವ ಪಡೆದನು ನಿನ್ನ ಕಾಲ್ಗುಣ ಇದಕೆಲ್ಲ ಕಾರಣ ಹಿಡಿದರೂ ಕುಣಿಯುತ ಹೃದಯವಿದು ಹಿಡಿತಕೆ ಸಿಗುತ್ತಿಲ್ಲ ಕುಂತರೂ ನಿಂತರೂ ನಿನ ಭಜನೆ, ಬೇರೆ ಕೆಲಸಾನೇ ಇಲ್ಲ ದಿನ ರಾತ್ರಿಯು ನಿಲ್ಲದೆ ನಿಲ್ಲದೆ ನಿನ್ನ ಜಾತ್ರೆಯು ಸಾಗಿದೆ ಸಾಗಿದೆ ಇದಕೊಂದು ಪರಿಹಾರ ತಿಳಿಸು ಮಾತಾಡದೇ ಸುಮ್ಮನೆ ಸುಮ್ಮನೆ ವಧು ಮಾಡಿಕೋ ನನ್ನನೇ ನನ್ನನೇ ಮುದ್ದಾಗಿ ಸಂಸಾರ ನಡಿಸು ಹಾಡು ಹಗಲೇ ಶುರುವಾಯ್ತು ಸುಲಿಗೆ ಹೌದು ನಲ್ಲ ಅತಿಯಾಯ್ತು ಸಲಿಗೆ ಸ ಗ, ಮಾ ಗ, ಮಾ ಗ, ಮಾ ಗ, ಮಾ ಗ, ಮ ಗ ಮ ಪ ಮ ಗ ರಿ ಗ ರಿ ನೀ ಇರಲು ಸಿಗೋ ಮಜವೇ ಬೇರೆ ಥರಾ ಥರಾ ಹಿಡಿಸಿದೆ ಮನಸಿಗೆ ನೀನು ಹಗಲಲೇ ಮುಳುಗಿದೆ ಕನಸಲಿ ನಾನು (ಕನಸಲಿ ನಾನು, ಕನಸಲಿ ನಾನು)