Suryakannu

Suryakannu

Rajesh Krishnan

Альбом: Jothe Jotheyali
Длительность: 5:03
Год: 2017
Скачать MP3

Текст песни

ಸೂರ್ಯ ಕಣ್ಣು ಹೊಡ್ದ ಕೈಲಿ ರೋಜ ಹಿಡ್ದ
ಹೆಸ್ರು ಏನೇ ಅಂದ ನನ್ ಹುಡುಗಿ ನೋಡಿ
ಚಂದ್ರ ಕಯ್ಯ ಹಿಡಿದ ಪ್ರೀತಿ ಮಾಡೆ ಅಂದ
ಇವ್ಳ ಹಿ೦ದೆ ಓಡ್ದ ಆಕಾಶ ಖಾಲಿ

ನನ್ನ ಹುಡುಗಿ ಜಾನಪದ ಸಾದ ಸೀದ ಹಳ್ಳಿ ನಾದ
ನನ್ನ ಹುಡುಗಿ ಜೀವಪದ ಬದುಕೋ ಕನಸೇ ಇವಳಿ೦ದ
ತೆಗೆದೇ ಬಿಟ್ಳು ಮಳ್ಳಿ ಪ್ರೀತಿಯ ಕದನ

ಸೂರ್ಯ ಕಣ್ಣು ಹೊಡ್ದ ಕೈಲಿ ರೋಜ ಹಿಡ್ದ
ಹೆಸ್ರು ಏನೇ ಅಂದ ನನ್ ಹುಡುಗಿ ನೊಡಿ

ನಿನ್ನ ಅಂದ ಕಂಡು ಕಂದ ಬೊಂಬೆ ಬೇಕು ಅಂದ
ಭೂಮಿಗ್ಯಾಕೆ ಇಳಿದಳೀಕೆ ಅಂತ ಇಂದ್ರ ನೊಂದ
ಚಿನ್ನಾ, ನಿನ್ನಾ ದಿನ ನೋಡೋ ಆಸೆ
ನೋಡಿ ಹಾಡೋ ಆಸೆ
ಹಾಡಿ ಕೂಡಿ ಮುದ್ದಾಡೋ ಆಸೆ, ಆಸೆ
ನನ್ನ ಹುಡುಗಿ ತಂಗಾಳಿ ಅವಳೇ ಇರದೇ ನಾನು ಖಾಲಿ
ನನ್ನ ಹುಡುಗಿ ಸುವ್ವಾಲಿ ಸುವ್ವಿ ಹಾಡು ಮಾತಲ್ಲಿ
ಇವಳು ನಕ್ರೆ ಸಕ್ರೆ ಚೆಲ್ಲುತ್ತೆ ಇಲ್ಲಿ

ದೀಪವಿರದ ಲೋಕದಲ್ಲಿ ಇವಳ ಕಣ್ಣೇ ಬೆಳಕು
ನಾದವಿರದ ನಾಡಿನಲ್ಲಿ ಇವಳ ಉಸಿರೇ ಪಲುಕು
ಅಂದ ಚಂದ ಸಾಲ ಕೇಳದಂತ ಸಾಲು ಕಟ್ಟಿ ನಿಂತ
ಇಡೀ ಸೃಷ್ಟಿ ಕಂಡಾಗ ಮೂಕ ನಾನು
ನನ್ನ ಹುಡುಗಿ ಕನ್ನಡತಿ ಸಹನೆ ಕರುಣೆ ಇವಳ ನೀತಿ
ನನ್ನ ಹುಡುಗಿ ಪ್ರಾಣಸಖಿ ಪ್ರಣಯ ಇವಳ ಕಿವಿ ಝುಮುಕಿ

ಸೂರ್ಯ ಕಣ್ಣು ಹೊಡ್ದ ಕೈಲಿ ರೋಜ ಹಿಡ್ದ
ಹೆಸ್ರು ಏನೇ ಅಂದ ನನ್ ಹುಡುಗಿ ನೋಡಿ
ಚಂದ್ರ ಕಯ್ಯ ಹಿಡಿದ ಪ್ರೀತಿ ಮಾಡೆ ಅಂದ
ಇವ್ಳ ಹಿಂದೆ ಓಡ್ದ ಆಕಾಶ ಖಾಲಿ