Hoovina Santhege
Sonu Nigam
3:46ಅವರಿವರ ಜೊತೆ ಸೇರದೆ ಅವರಿವರ ನುಡಿ ಕೇಳದೆ ಗೆಳತಿಯರ ಜೊತೆ ಹೋಗದೆ ಪರಿಚಿತರ ಬಳಿ ಕೂರದೇ ನನ್ನನ್ನಷ್ಟೇ ಸಾಯೋ ಹಾಗೆ ನೀನು ಪ್ರೀತಿಸು ನಿನ್ನ ಎಲ್ಲ ಆಸೆಗಳ ಸಾಲಿನಲ್ಲಿ ಎಂದು ನನ್ನ ಮುಂದೆ ಇರಿಸು ಅವರಿವರ ಜೊತೆ ಸೇರದೆ ಅವರಿವರ ನುಡಿ ಕೇಳದೆ ನೀ ಹೇಳುವ ನಾ ಕೇಳುವ ಮಾತು ಒಂದೇ ಆಗಲಿ ನೀನಾಡುವ ಸುಳ್ಳಲಿಯು ನಾನೇ ಇರಲಿ ನೀ ಸೋತರು ನಾ ಸೋತರು ಪ್ರೀತಿ ಎಂದು ಗೆಲ್ಲಲಿ ನೀನೆನ್ನುವ ನಾನೆನ್ನುವ ಮಾತಿನೆಲ್ಲಿ ನಗುವೆಲ್ಲಾ ನನಗಾಗಿ ಕೂಡಿಹಾಕು ಮುನಿಸನ್ನು ಬರದಂತೆ ದೂರ ನೂಕು ಮನಸಲ್ಲಿ ಮರೆಮಾಚಿ ಇಟ್ಟಾ ಎಲ್ಲಾ ಗುಟ್ಟುಗಳ ನನ್ನೆದುರೆ ತೆರೆಯಬೇಕು ಏನನ್ನೋ ಹುಡುಕುವ ಗಳಿಗೆ ನನ್ನ ನಗುವೆ ನಿನಗೆ ಸಿಗಲಿ ಯಾರನ್ನೋ ಕರೆಯುವ ಕ್ಷಣದಿ ನನ್ನ ಹೆಸರೇ ಮೊದಲು ಬರಲಿ ಬೇರೆ ಏನು ಯೋಚಿಸದೆ ನನ್ನ ಪ್ರೀತಿಸು ನಿನ್ನ ಎಲ್ಲಾ ಆಸೆಗಳ ಸಾಲಿನಲ್ಲಿ ಎಂದು ನನ್ನ ಮುಂದೆ ಇರಿಸು ನೀ ಹೇಳುವ ನಾ ಕೇಳುವ ಮಾತು ಒಂದೇ ಆಗಲಿ ನೀನಾಡುವ ಸುಳ್ಳಲಿಯು ನಾನೇ ಇರಲಿ ನೀ ಸೋತರು ನಾ ಸೋತರು ಪ್ರೀತಿ ಎಂದು ಗೆಲ್ಲಲಿ ನೀನೆನ್ನುವ ನಾನೆನ್ನುವ ಮಾತಿನೆಲ್ಲಿ ನೆರಳಾಗಿ ಹಗಳೆಲ್ಲಾ ನೀನು ಬೇಕು ಕನಸಾಗಿ ಇರುಳೆಲ್ಲಾ ಕಾಡಬೇಕು ಬದುಕಲ್ಲಿ ಗುರಿಯಂತೆ ನನ್ನ ಸೇರಿ ಅನುರಾಗ ಅನುಗಾಲ ನೀಡು ಸಾಕು ಮುಂಜಾನೆ ಬೆಳಕಲಿ ಸ್ಮರಿಸು ಸರಿ ರಾತ್ರಿ ಕನಸಲಿ ವರಿಸು ಜಗವೆಲ್ಲ ಹೊಗಳುವ ವೇಳೆ ಮನಸಲ್ಲಿ ನನ್ನನೇ ನೆನೆಸು ದೇವರನ್ನು ಬೇಡುವಾಗ ನನ್ನ ಜಪಿಸು ನಿನ್ನ ಎಲ್ಲಾ ಆಸೆಗಳ ಸಾಲಿನಲ್ಲಿ ಎಂದು ನನ್ನ ಮುಂದೆ ಇರಿಸು ಅವರಿವರ ಜೊತೆ ಸೇರದೆ ಅವರಿವರ ನುಡಿ ಕೇಳದೆ