Ninnindale

Ninnindale

Sonu Nigam

Альбом: Milana
Длительность: 4:50
Год: 2007
Скачать MP3

Текст песни

ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ

ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ

ಇರುಳಲ್ಲಿ ಜ್ವರದಂತೆ ಕಾಡಿ ಈಗ
ಹಾಯಾಗಿ ನಿಂತಿರುವೆ ಸರಿ ಏನು
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೋ ನೋಡುವ ಪರಿ ಏನು
ಈ ಮಾಯೆಗೆ, ಈ ಮರುಳಿಗೆ ನಿನ್ನಿಂದ ಕಳೆ ಬಂದಿದೆ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ

ಹೋದಲ್ಲಿ ಬಂದಲ್ಲಿ ಎಲ್ಲಾ ನಿನ್ನ
ಸೊಂಪಾದ ಚೆಲುವಿನ ಗುಣಗಾನ
ಕೇದಿಗೆ ಗರಿಯಂಥ ನಿನ್ನ ನೋಟ
ನನಗೇನೋ ಅಂದಂತೆ ಅನುಮಾನ
ಕಣ್ಣಿಂದಲೇ ಸದ್ದಿಲ್ಲದೆ ಮುದ್ದಾದ ಕರೆ ಬಂದಿದೆ