O Maina

O Maina

Rajesh Krishnan

Альбом: Yejamana
Длительность: 5:36
Год: 2000
Скачать MP3

Текст песни

ಓ ಮೈನಾ ಓ ಮೈನಾ ಏನಿದು ಮಾಯೆ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೆ ಅನುರಾಗ ಎನ್ನಲೆ
ಪ್ರೀತಿ ಎನ್ನಲೆ ಹೊಸ ಮಾಯೆ ಎನ್ನಲೆ
ಓ ಮೈನಾ ಓ ಮೈನಾ ಏನಿದು ಮಾಯೆ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
ಕಾವೇರಿ ತೀರದಲಿ ಬರೆದೆನು ನಿನ್ ಹೆಸರ
ಮರಳೆಲ್ಲಾ ಹೊನ್ನಾಯ್ತು ಯಾವ ಮಾಯೆ
ಬಿದಿರಿನ ಕಾಡಿನಲಿ ಕೂಗಿದೆ ನಿನ್ ಹೆಸರ
ಬಿದಿರೆಲ್ಲಾ ಕೊಳಲಾಯ್ತು ಯಾವ ಮಾಯೆ
ಸೂತ್ರವು ಇರದೆ ಗಾಳಿಯು ಇರದೆ
ಬಾನಲಿ ಗಾಳಿಪಟವಾಗಿರುವೆ
ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ
ಓ ಮೈನಾ ಓ ಮೈನಾ ಏನಿದು ಮಾಯೆ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
ಬೇಡನ ಕಣ್ಣಿಗೆ ಬಾಣವ ನಾಟಿಸುವ
ಈ ಜಿಂಕೆ ಬೇಟೆಯಿಲ್ಲಿ ಯಾವ ಮಾಯೆ
ಹತ್ತಿಯೆ ಬೆಂಕಿಯನು ಹತ್ತಿಸುವ ಮಾಯೆ
ಮೀನುಗಳೇ ಗಾಳ ಬೀಸೋ ಯಾವ ಮಾಯೆ
ಆಕಾಶಕ್ಕೆ ಬಲೆಯ ಬೀಸಿ
ಮೋಡ ನಗುವ ಮರ್ಮ ಏನೋ
ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ
ಓ ಮೈನಾ ಓ ಮೈನಾ ಏನಿದು ಮಾಯೆ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೆ ಅನುರಾಗ ಎನ್ನಲೆ
ಪ್ರೀತಿ ಎನ್ನಲೆ ಹೊಸ ಮಾಯೆ ಎನ್ನಲೆ